"ನಿನ್ನ ಪ್ರೇಮದ ಪರಿಯ ನಾನರಿಯೇ ಕನಕಾಂಗಿ..." ಸಿ. ಅಶ್ವಥ್ ರವರ ಹಾಡು ಹಾಗೇ ಮುಂದುವರೆದಿತ್ತು. ಖಾಲಿ ರಸ್ತೆ, ಮಧ್ಯಾಹ್ನದ ಬಿರುಬಿಸಿಲಿನಲ್ಲಿ ಕಾರು ಹಾಗೆಯೇ ಸಾಗುತ್ತಲಿತ್ತು.
ಎಲ್ಲಿಗೆ ಹೊರಟಿದ್ದೇನೆ ಎಂಬ ಗುರಿಯೂ ಇಲ್ಲದೆ, ಎಲ್ಲಿಗೆ ಹೋಗಬೇಕೆಂಬ ಗೊಂದಲವೂ ಇಲ್ಲದೆ ಆದಿತ್ಯ ನೆಮ್ಮದಿಯನ್ನು ಹುಡುಕಿ ಹೊರಟಿದ್ದ. ಖಾಲಿ ರಸ್ತೆ, ಸುತ್ತಲೂ ಮರುಭೂಮಿ, ನನ್ನ ಜೀವನವೂ ಹೀಗೆ ಖಾಲಿಯಾಯಿತಾ ಎನ್ನುವ ಅನುಮಾನವೊಂದು ಕಾಡಲಾರಂಭಿಸಿತು.
ಹೌದು, ಒಂದು ವರ್ಷದ ಹಿಂದೆ ಎಷ್ಟು ಚೆನ್ನಾಗಿತ್ತು ಜೀವನ. ಒಳ್ಳೆ ಕೆಲಸ, ಕೈತುಂಬ ಸಂಬಳ, ಕಾರು, ಮನೆ ಎಲ್ಲವೂ ಇತ್ತು.
ಎಲ್ಲವನ್ನೂ ನೆನೆಯುತ್ತ ನೆನಪಿನಂಗಳಕ್ಕೆ ಜಾರಿದ ಆದಿತ್ಯ.
--------------------*--------------------*---------------------
ಮಳೆಗಾಲ.. ಸುತ್ತಲೂ ಮಲೆನಾಡಿನ ಹಸಿರು.. ಎಷ್ಟು ಹೊತ್ತಾದರೂ ಬಿಡದ ಜಿಟಿ ಜಿಟಿ ಮಳೆ.. ಸುತ್ತಲೂ ನಿಸರ್ಗದ ಸೌಂದರ್ಯವನ್ನೇ ಹೊತ್ತು ನಿಂತಿರುವ ಹಸಿರು ಬೆಟ್ಟ ಗುಡ್ಡಗಳು, ಕಾಡು, ಅರಳಿ ನಿಂತಿರುವ ಹೂಗಳು, ಮಳೆಗೆ ಖುಷಿಯಾಗಿ ಅರಚುತ್ತಿರುವ ಕಪ್ಪೆಗಳು, ಅಬ್ಬಾ ಮಳೆಗಾಲದ ಅನುಭವವೇ ಬೇರೆ. ಅದರಲ್ಲೂ ಮಲೆನಾಡಿನ ಪ್ರಕೃತಿ ಸೊಬಗಿನ ಮುಂದೆ ಯಾವ ಸ್ವರ್ಗವೂ ಇಲ್ಲ.
ಪ್ರಕೃತಿಯ ಸೊಬಗನ್ನು ಸವಿಯುತ್ತ ಬೆಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿದ್ದ ಆದಿತ್ಯ.
ಅಬ್ಬಾ ಇಲ್ಲಿಯವರೆಗೂ ಬೆಂಗಳೂರಿನ ಬಗ್ಗೆ ಕೇಳಿದ್ದಷ್ಟೇ. ಯಾರನ್ನೇ ಕೇಳಿದರೂ ಬಗೆ ಬಗೆಯ ಕಥೆಗಳು, ವರ್ಣನೆಗಳು ಎಲ್ಲರದೂ ವಿಭಿನ್ನ ಅನುಭವವೇ.
ಬೆಂಗಳೂರು.. ಮಾಯಾನಗರಿ...!
ಮೊದಲ ಬಾರಿಗೆ ಬೆಂಗಳೂರಿಗೆ ಹೊರಟಾಗ ಕೌತುಕ, ಭಯ, ಖುಷಿ, ಮಾಯಾನಗರಿಯ ಬಗ್ಗೆ ಭಿನ್ನ ವಿಭಿನ್ನ ಕುತೂಹಲಗಳೆಲ್ಲವೂ ಆವರಿಸಿತ್ತು ಮನದೊಳಗೆ.
ಹೊರಡುವ ಮುಂಚೆ ಅಮ್ಮ ತೋರಿದ ಕಾಳಜಿ, ಆಚೆ ಚೆನ್ನಾಗಿರೋ ಕಡೆನೇ ಊಟ ಮಾಡು, ಜಾಸ್ತಿ ಸುತ್ತಾಡಬೇಡ, ಆರೋಗ್ಯ ನೋಡಿಕೊ ಎಂಬೆಲ್ಲ ಮಾತುಗಳೊಂದಿಗೆ ಪ್ರೀತಿಯಿಂದ ಮಾಡಿದ ತಿಂಡಿ ತಿನಿಸುಗಳೆಲ್ಲವನ್ನೂ ಆದಿತ್ಯನಿಗೇ ತುಂಬಿಸಿ ಕೊಟ್ಟಿದ್ದಳು ಅಮ್ಮ.
ಇನ್ನು ಅಪ್ಪ ಹೇಳಿದ ಮಾತುಗಳು, ಯಾರೊಂದಿಗೆ ವ್ಯವಹರಿಸುವಾಗಲೂ ಹುಷಾರು, ಹಣ ಭದ್ರವಾಗಿಟ್ಟುಕೊ, ಪ್ರತಿದಿನ ಫೋನ್ ಮಾಡು ಎಂಬ ಸಲಹೆಗಳು ಆದಿತ್ಯನ ಮೇಲಿರುವ ಪ್ರೀತಿಯನ್ನು ವಿಭಿನ್ನ ಬಗೆಯಿಂದಲೇ ವ್ಯಕ್ತಪಡಿಸಿದ್ದರು ಅಪ್ಪ.
ಅಂತೂ ಬೇರೆಯವರ ವರ್ಣನೆಯಿಂದಲೇ ಕೇಳಿ ತಿಳಿದಿದ್ದ ಬೆಂಗಳೂರಿನ ಅನುಭವವನ್ನು ಸ್ವತಃ ಆದಿತ್ಯನೇ ಅನುಭವಿಸುವ ಕಾಲ ಕೂಡಿ ಬಂದಿತ್ತು.
ಇನ್ನೇನು ಬಸ್ಸು ಬೆಂಗಳೂರಿಗೆ ಸನಿಹವಾಗುತ್ತಿದೆ ಎಂದಾಗ ಎದೆ ಬಡಿತವೂ ಜಾಸ್ತಿಯಾಗಿತ್ತು.
ಅಂತೂ ಬಸ್ಸು ಬೆಂಗಳೂರಿಗೆ ಬಂತು. ಬಸ್ಸನ್ನಿಳಿದು ಮೆಜೆಸ್ಟಿಕ್ ನಲ್ಲಿ ಬೆರಗಿನ ಕಣ್ಣುಗಳಿಂದಲೇ ಅತ್ತಿತ್ತ ನೋಡುತ್ತಾ ನಿಂತಿದ್ದ ಆದಿತ್ಯ.

----------------------*------------------------*----------------------
ಪ್ರಕೃತಿ.. ಬರೀ ಮಾತಿನಿಂದಲೇ ಜಗತ್ತನ್ನು ಗೆಲ್ಲಬಲ್ಲೆನೆಂಬ ಹುಮ್ಮಸ್ಸು, ಮುದ್ದು ಮುಖ, ಪ್ರಕೃತಿಯ ಎಲ್ಲವನ್ನೂ ಕೌತುಕದಿಂದಲೇ ಕಾಣುವ ಹೊಳೆಯುವ ಕಣ್ಣುಗಳು, ಸೌಂದರ್ಯವನ್ನು ಹೆಚ್ಚಿಸಲೆಂಬಂತೆಯೇ ಗಾಳಿಗೆ ಹಾರಾಡುತ್ತ ಮುಖದ ಮೇಲೆ ಮತ್ತೆ ಮತ್ತೆ ಬರುತ್ತಿರುವ ಮುಂಗುರುಳು, ಬೆಳದಿಂಗಳನ್ನೇ ನಾಚಿಸುವ ಸೌಂದರ್ಯ, ಆತ್ಮವಿಶ್ವಾಸವೇ ಬಲ ಎಂದು ನಂಬಿದ ಹುಡುಗಿ. ಸುರಿವ ತುಂತುರು ಮಳೆಯ ನಡುವೆ ಬಸ್ಸಿಗಾಗಿ ಕಾಯುತ್ತಿದ್ದಳು.
ಮುಂದುವರೆಯುವದು. . . . . . . .

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ